Why HD Kumaraswamy is not ready to move to official residence from JP Nagar home? Here is an interesting story. It all started when black cobra appeared in his JP Nagar residence. Ever since then, HDK is on the rise.
ಯಾರೆಷ್ಟೇ ಹೇಳಿದರೂ ಮುಖ್ಯಮಂತ್ರಿ ಕುಮಾರಸ್ವಾಮಿ ತಮ್ಮ ಜೆ.ಪಿ. ನಗರದ ನಿವಾಸವನ್ನು ತೊರೆಯಲು ಒಪ್ಪುತ್ತಿಲ್ಲ. ಇತ್ತೀಚಿನ ವರ್ಷಗಳಲ್ಲಿ ಮುಖ್ಯಮಂತ್ರಿಯಾದವರೊಬ್ಬರು ಸರ್ಕಾರಿ ಬಂಗಲೆಗೆ ಹೋಗಲು ಆಸಕ್ತಿಯನ್ನೇ ತೋರದಿರುವುದು ಇದು ಮೊದಲ ಬಾರಿ.ಕುಮಾರಸ್ವಾಮಿ ಮಾತ್ರ ಜೆ.ಪಿ. ನಗರದ ಮನೆಯನ್ನು ಬಿಡಲು ಬಿಲ್ ಕುಲ್ ಒಪ್ಪುತ್ತಿಲ್ಲ. ಇದಕ್ಕೇನು ಕಾರಣ? ಎಂಬ ಪ್ರಶ್ನೆಯನ್ನು ಮುಂದಿಟ್ಟುಕೊಂಡು ಹೋದರೆ ಒಂದೂವರೆ ವರ್ಷಗಳ ಮುನ್ನ ಆರಂಭವಾದ ಕತೆ ಬಿಚ್ಚಿಕೊಳ್ಳುತ್ತದೆ.